Album: patriotic songs ದೇಶಭಕ್ತಿ ಗೀತೆಗಳು
Actor (s): Ramakrishna Umashree
Shridhar padma Vasanthi Singer(s): jeyachandran
Lyricst (s): Vijaya Narasimha
Music Director: Vijaya Narasimha
Music Label:
HINDUSTHANAVU...
ಹಿಂದೂಸ್ಥಾನವು ಎಂದೂ ಮರೆ...
SONG LYRICS
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ ,
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ,
ಈ ಕನ್ನಡ ಮಾತೆಯ ಮಡಿಲಲ್ಲಿ ,ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ
ದೇಶ ಭಕ್ತಿಯಾ,ಬಿಸಿ,ಬಿಸಿ,ನೆತ್ತರು ಧಮನಿ,ಧಮನಿಯಲಿ ತುಂಬಿರಲಿ,
ದೇಶ ಭಕ್ತಿಯಾ,ಬಿಸಿ,ಬಿಸಿ,ನೆತ್ತರು ಧಮನಿ,ಧಮನಿಯಲಿ ತುಂಬಿರಲಿ,
ವಿಶ್ವ ಪ್ರೇಮದಾ ಶಾಂತಿ ಮಂತ್ರದ ಘೋಷಣೆ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ಸತ್ವ ಸಮನ್ವಯ,ಸತ್ಯ ಜೋತಿಯ ಬೆಳಗಿಸಲಿ
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ,
ಕನ್ನಡ ನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ,
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲ್ಲಿ ಕೆತ್ತಿಸಲಿ
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ ,ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದುಸ್ಥಾನವು ಎಂದು ಮರೆಯದ ,ಭಾರತ ರತ್ನವು ಜನ್ನಿಸಲಿ
0 Comments